Saturday, August 8, 2009

ಯಾರ ನೆರಳಿದು ?

ನಾನು
ಸೆರೆಮನೆಯಲ್ಲಿದ್ದೇನೆ.
ರಾತ್ರಿಯ ಬೆಳದಿಂಗಳ ಕಾಣುವಾಸೆ.
ಚಂದ್ರನಿಗೆ
ಅಡ್ಡ ನಿಂತವರು ಯಾರು?

ನಾನು
ಸೆರೆಮನೆಯಲ್ಲಿದ್ದೇನೆ.
ಒಂದಿಷ್ಟು ಸುವಾಸನೆಯನ್ನು ಹೀರುವಾಸೆ.
ಹೂಗಳನ್ನು
ಬೂಟಿನಲ್ಲಿ ತುಳಿದವರು ಯಾರು?

ನಾನು
ಸೆರೆಮನೆಯಲ್ಲಿದ್ದೇನೆ.
ಹಿಡಿ ಬಣ್ಣಗಳನು ನೋಡುವಾಸೆ.
ಚಿಟ್ಟೆಗಳನು ಹಿಡಿದು
ರೆಕ್ಕೆಗಳನು ಕಿತ್ತವರು ಯಾರು?

ನಾನು
ಸೆರೆಮನೆಯಲ್ಲಿರುವೆ.
ಮುಂಜಾವುಗಳನು ನೋಡುವಾಸೆ.
ಕಿಟಕಿಗಳನು ದಢಾರೆಂದು
ಮುಚ್ಚಿದವರು ಯಾರು?

ನಾನು
ಸೆರೆಮನೆಯಲ್ಲಿರುವೆ.
ಹೊರಗೆ ನಡೆಯುತ್ತಿರುವ
ಯುದ್ಧವನ್ನು ನೋಡುವಾಸೆ.
ನನಗೆ ಗಲ್ಲು ಶಿಕ್ಷೆಯನ್ನು
ವಿಧಿಸಿದವರು ಯಾರು?

- ತೆಲುಗು ಮೂಲ: ಆಶಾ ರಾಜು

Thursday, April 23, 2009

Farewell my friends

Together, we sprinkled smiles on the miles we tread
And at times, a drop or two, tears we shed
We know we can go on forever
But the stage is set elsewhere.

How strange are the moves of time?
The inevitable comes always in prime
Parting is a part of life
Let’s have a par-tea before we part

Farewell………… Adieu…………. My friends.

[Composed as an invitation to a farewell party thrown by Swapna’s classmates to their seniors at NIT Warangal.]

Tuesday, April 21, 2009

ನಿಸ್ತೇಜ

ಕ್ಷಣಗಳ ತುಂಬಾ
ಶೂನ್ಯ ಸಂಗೀತ
ಕಾಲದಲ್ಲಿ ಇಷ್ಟೊಂದು ಡೊಳ್ಳುತನ
ನಾನೆಂದೂ ನೋಡಿರಲಿಲ್ಲ.

ಹಸಿವಾಗಿದ್ದರೂ
ಉಪವಾಸವಿದ್ದಂತೆ
ಆಲೋಚನೆಗಳ ತುಂಬಾ
ಅಮೂರ್ತ ಚಲನೆ.

ಗರಗರ ತಿರುಗುವ
ಪರದೇಶಿ!
ಇಲ್ಲಿ ನಿನ್ನ ನೆರಳೇ
ಚದುರಿ ಹೋಗುತಿದೆ.

ಕಾಲಕ್ಕೆ
ಧೂಳು ಹಿಡಿದಿದೆ
ವರೆಸಿಕೊಂಡು
ನೋಡುವುದು ಒಳ್ಳೆಯದು.

ತೆಲುಗು ಮೂಲ: ಡಾ. ಎನ್. ಗೋಪಿ.

ಮರಣವಿಲ್ಲದ ಮಾತು

ಕೋಪವೆಂದರೆ ಪಾಪವೇ
ಒಳ್ಳೆಯ ಮನಸಿಗೆ ಶಾಪವೇ
ಶತ್ರುವನ್ನೂ ಮಿತ್ರನನ್ನಾಗಿಸುವ
ಸಹನೆಯು ಜೊತೆಗಿದ್ದಲ್ಲಿ
ಸಿರಿವಂತನು ಅವನೇ.


ಯಾರಿಗೋ ಒಳ್ಳೆಯದಾದರೆ
ಯಾಕೋ ನಿನಗೆ ಬಾಧೆ?
ಎಷ್ಟು ನಿಂದಿಸಿದರೇನು,
ತುಂಬುವುದೇ ನಿನ್ನ ಹೊಟ್ಟೆ?


ಬಿಡಲೇಬೇಕೆಂದರೆ
ಬಿಡು ಪರ ಹಿಂಸ
ನಿಖಿತ ಜಗತಿಗೆ
ಆಗುವೆ ಪರಮಹಂಸ.


ಅಹಿಂಸೆಯಲ್ಲಿನ
’ಅ’ ಕಾರ
ಶಾಂತಿಯ ಮುಂದು ಸೇರಲು
ವಿಕಾರ.


ಆಕೆ ಕಣ್ಣಿಂದ
ಸುರಿದದ್ದು ನೀರಾ...?
ಅಲ್ಲ.... ಆತ
ನಿನ್ನೆ ಕುಡಿದ ಸಾರಾ....


ಪರರಿಗಾಗೇ ಬೆಳಗಿ
ಪರೋಪಕಾರದಲ್ಲಿ ಪಳಗಿ
ದೇಹವ ತ್ಯಜಿಸುವವನೇ
ತ್ಯಾಗ ಜೀವಿ..


ಇರುವ ಸ್ಥಾನದಿಂದ
ಮೇಲೆ
ಏರಿದರೆ ಪಟ್ಟ.
ಜಾರಿದರೆ ಚಟ್ಟ.

ಚಂದ್ರನಿಗಿಂತ
ಚುಕ್ಕಿಯೇ ವಾಸಿ
ಸ್ವಯಂ ಶಕ್ತಿಯ ಮುಂದೆ
ಎಲ್ಲಾ ಹುಸಿ.

Monday, April 20, 2009

ಕುರ್ಚಿ

ಅಧಿಕಾರದ ಕುರ್ಚಿಯೆಂಬುದು
ಮರದ್ದಾದರೂ
ಲೋಹದ್ದಾದರೂ
ರತ್ನ ಖಚಿತವಾಗಿದ್ದರೂ
ಚಿನ್ನ-ಬೆಳ್ಳಿಯಿಂದ ಮಾಡಲ್ಪಟ್ಟಿದ್ದರೂ
ಬೇರಾವ ಪದಾರ್ಥದಿಂದ ಮಾಡಲ್ಪಟ್ಟಿದ್ದರೂ
ಅದು ಅಧಿಕಾರದ ಕುರ್ಚಿಯೇ!!

ಅಧಿಕಾರದ ಕುರ್ಚಿಯಿಂದ
ಸಿಂಹವನ್ನು ಹೊರದಬ್ಬಿದಾಗ
ಅದು ಕುರಿಯಾಗಿ
"ಉಮ್ಮೆಹೆಹೆಹೆ.........ಉಮ್ಮೆಹೆಹೆಹೆ......." ಎಂದು
ದಯನೀಯವಾಗಿ ಅರಚಲಾರಂಭಿಸುತ್ತದೆ.

ಅಧಿಕಾರದ ಕುರ್ಚಿಯ ಮೇಲೆ
ಕುರಿಯನ್ನು ಕೂರಿಸಿದರೆ
ಕ್ಷಣದಲ್ಲಿಯೇ ಅದು ಸಿಂಹವಾಗಿ
"ಗುರ್ರ್.......ಗುರ್ರ್........." ಎಂದು
ಕ್ರೂರವಾಗಿ ಘರ್ಜಿಸಲಾರಂಭಿಸುತ್ತದೆ.

ಅಧಿಕಾರದ ಕುರ್ಚಿಯೇ ದೇಶವಾಗೋದಾಗ
ದೇಶ ಮೌನವಾಗಿ ರೋಧಿಸಲಾರಂಭಿಸುತ್ತದೆ.
ಆಗ ದೇಶವೆಂಬುದು ಎಲ್ಲಿರುತ್ತದೆಯೋ!!!???

ನೇಪಾಳಿ ಮೂಲ : ಮಹೇಂದ್ರ ಷಾಹಿ