Tuesday, April 21, 2009

ಮರಣವಿಲ್ಲದ ಮಾತು

ಕೋಪವೆಂದರೆ ಪಾಪವೇ
ಒಳ್ಳೆಯ ಮನಸಿಗೆ ಶಾಪವೇ
ಶತ್ರುವನ್ನೂ ಮಿತ್ರನನ್ನಾಗಿಸುವ
ಸಹನೆಯು ಜೊತೆಗಿದ್ದಲ್ಲಿ
ಸಿರಿವಂತನು ಅವನೇ.


ಯಾರಿಗೋ ಒಳ್ಳೆಯದಾದರೆ
ಯಾಕೋ ನಿನಗೆ ಬಾಧೆ?
ಎಷ್ಟು ನಿಂದಿಸಿದರೇನು,
ತುಂಬುವುದೇ ನಿನ್ನ ಹೊಟ್ಟೆ?


ಬಿಡಲೇಬೇಕೆಂದರೆ
ಬಿಡು ಪರ ಹಿಂಸ
ನಿಖಿತ ಜಗತಿಗೆ
ಆಗುವೆ ಪರಮಹಂಸ.


ಅಹಿಂಸೆಯಲ್ಲಿನ
’ಅ’ ಕಾರ
ಶಾಂತಿಯ ಮುಂದು ಸೇರಲು
ವಿಕಾರ.


ಆಕೆ ಕಣ್ಣಿಂದ
ಸುರಿದದ್ದು ನೀರಾ...?
ಅಲ್ಲ.... ಆತ
ನಿನ್ನೆ ಕುಡಿದ ಸಾರಾ....


ಪರರಿಗಾಗೇ ಬೆಳಗಿ
ಪರೋಪಕಾರದಲ್ಲಿ ಪಳಗಿ
ದೇಹವ ತ್ಯಜಿಸುವವನೇ
ತ್ಯಾಗ ಜೀವಿ..


ಇರುವ ಸ್ಥಾನದಿಂದ
ಮೇಲೆ
ಏರಿದರೆ ಪಟ್ಟ.
ಜಾರಿದರೆ ಚಟ್ಟ.

ಚಂದ್ರನಿಗಿಂತ
ಚುಕ್ಕಿಯೇ ವಾಸಿ
ಸ್ವಯಂ ಶಕ್ತಿಯ ಮುಂದೆ
ಎಲ್ಲಾ ಹುಸಿ.

No comments:

Post a Comment